ಜಿರಿಯಾಟ್ರಿಕ್ ಮೆಡಿಸಿನ್


ಮಣಿಪಾಲ್ ಆಸ್ಪತ್ರೆಯ ಜಿರಿಯಾಟ್ರಿಕ್ ಮೆಡಿಸಿನ್ ವಿಭಾಗವು ವೃದ್ಧ ರೋಗಿಗಳಲ್ಲಿನ ಸಂಕೀರ್ಣ ವೈದ್ಯಕೀಯ ಅಥವಾ ಸಾಮಾಜಿಕ ಸಮಸ್ಯೆಗಳನ್ನು ಪತ್ತೆ ಮಾಡಲು ಮತ್ತು ಚಿಕಿತ್ಸೆ ನೀಡಲು ಪರಿಣಿತಿಯನ್ನು ಪಡೆದಿದ್ದಾರೆ. ಮಣಿಪಾಲ್ ನಲ್ಲಿ ನಾವು ಒಟ್ಟಾರೆ ಜಿರಿಯಾಟ್ರಿಕ್ ಆರೈಕೆ ಯೋಜನೆಗಳನ್ನು ರಚಿಸಿದ್ದು ಅವು ಕೇವಲ ಅವರ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಲು ಮಾತ್ರವಲ್ಲದೆ ಅವರ ಜೀವನದ ಗುಣಮಟ್ಟವನ್ನು ಸಹ ಸುಧಾರಿಸುತ್ತದೆ. ನಮ್ಮ ವೈದ್ಯಕೀಯ ಮತ್ತು ಸಂಶೋಧನೆಯ ಹೆಚ್ಚಿನ ಭಾಗವು ಬುದ್ದಿಮಾಂದ್ಯತೆಯ ಆರೈಕೆಯ ಮೇಲೆ ಗಮನಹರಿಸುತ್ತದೆ.

OUR STORY

Know About Us

Why Manipal?

ಮಣಿಪಾಲ್ ನಲ್ಲಿ ವೃದ್ಧರನ್ನು ಆರೈಕೆ ಮಾಡುವಾಗ, ಅವರಿಗೆ ಚಿಕಿತ್ಸೆಯನ್ನು ನೀಡುವಾಗ ಒಂದು ತಂಡ ವಿಧಾನವನ್ನು ಅನುಸರಿಸಬೇಕು ಎನ್ನುವುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ನಾವು ಅವರ ಕುಟುಂಬದ ಅಥವಾ ಆರೈಕೆದಾರರಿಗೂ ಸಹ ಬೆಂಬಲ ಸೇವೆಗಳನ್ನು ಒದಗಿಸುತ್ತೇವೆ. ಮಣಿಪಾಲ್ ನ ವಿಶೇಷ ತಂಡದಲ್ಲಿ ಭೌತಿಕ ಚಿಕಿತ್ಸಕರು, ನರ್ಸ್ ಗಳು, ಪೌಷ್ಟಿಕತಜ್ಞರು, ಔದ್ಯೋಗಿಕ ಚಿಕಿತ್ಸಕರು, ಸಾಮಾಜಿಕ ಕಾರ್ಯಕರ್ತರು, ಮಾತು ಮತ್ತು ಶ್ರವಣ ತಜ್ಞರು ಮತ್ತು ಮಾನಸಿಕ ಸಮಾಲೋಚಕರು ಒಳಗೊಂಡಿದ್ದಾರೆ. ಮಣಿಪಾಲ್ ಆಸ್ಪತ್ರೆಯ ಜಿರಿಯಾಟ್ರಿಕ್ಸ್ ತಂಡವು ಹಿರಿಯ ನಾಗರಿಕರ ಆರೈಕೆ ಯೋಜನೆಯನ್ನು ರಚಿಸುವ ಸಮಯದಲ್ಲಿ ಅವರ ಸಾಮಾಜಿಕ, ಭಾವನಾತ್ಮಕ ಮತ್ತು ವೈದ್ಯಕೀಯ ಅಗತ್ಯತೆಗಳನ್ನು ಪರಿಗಣಿಸುವುದರ ಜೊತೆಯಲ್ಲಿ ಅವರ ಆದ್ಯತೆಗಳು ಮತ್ತು ಮೌಲ್ಯಗಳ ಮೇಲೆಯೂ ಸಹ ಗಮನ ಹರಿಸುತ್ತಾರೆ. ನಾವು ಆರೋಗ್ಯದ ಸಮಸ್ಯೆಗಳ ಮೇಲೆ ಗಮನಹರಿಸುವುದರ ಜೊತೆಯಲ್ಲಿ ಇತರ ಸಮಸ್ಯೆಗಳಾದಂತಹ ಮರೆವು, ಬೀಳುವುದು, ಮೂತ್ರ ತಡೆಹಿಡಿಯಲಾಗದೇ ಇರುವುದು, ಔಷಧಿಗಳು ಮತ್ತು ಅನೇಕ ದೀರ್ಘಾವಧಿಯ ಸಮಸ್ಯೆಗಳ ನಿರ್ವಹಣೆಯಲ್ಲಿಯೂ ಸಹ ಪರಿಣಿತಿಯನ್ನು ಹೊಂದಿದ್ದೇವೆ.

ಮಣಿಪಾಲ್ ಆಸ್ಪತ್ರೆಯಲ್ಲಿ, ನಾವು ವಿಭಿನ್ನ ಕಾಯಿಲೆಗಳು ಅಥವಾ ವೈದ್ಯಕೀಯ ಪರಿಸ್ಥಿತಿಗಳಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆ ನೀಡುವಲ್ಲಿ ನಮಗೆ ಉತ್ತಮ ಅನುಭವ ಇದೆ. ನಮ್ಮ ತಜ್ಞರು ಶ್ವಾಸಕೋಶದ ಸಮಸ್ಯೆಗಳು, ನ್ಯೂರೋಪಥಿ, ಹೃದ್ರೋಗ ಸಮಸ್ಯೆಗಳು, ಅಸ್ಥಿರಂಧ್ರತೆ ಮತ್ತು ಮಧುಮೇಹದಂತಹ ಅಸ್ವಸ್ಥೆಗಳನ್ನು ಒಳಗೊಂಡಂತೆ ವಿಸ್ತಾರ ಶ್ರೇಣಿಯಲ್ಲಿ ಪರಿಣಿತಿಯನ್ನು ಪಡೆದಿದ್ದಾರೆ. 

ಚಿಕಿತ್ಸೆ ಮತ್ತು ಡಯಾಗ್ನೋಸ್ಟಿಕ್ ನೀತಿ - ಮಣಿಪಾಲ್ ಆಸ್ಪತ್ರೆಗಳು ವೈಯಕ್ತಿಕ ಮಟ್ಟದಲ್ಲಿ ಸಮಗ್ರ ಆರೈಕೆಯನ್ನು ಒದಗಿಸುವ ಉದ್ದೇಶದಿಂದ ಹಿರಿಯ ವಯಸ್ಕರಲ್ಲಿ ಚಿಕಿತ್ಸೆ ನೀಡುವಾಗ ಸಮಗ್ರ ಮತ್ತು ವೈಯಕ್ತಿಕ ವಿಧಾನವನ್ನು ಅನುಸರಿಸುತ್ತದೆ. ಇದರಲ್ಲಿ ರೋಗಿಯ ಜೀವನದ ಮಟ್ಟವನ್ನು ಸುಧಾರಿಸುವುದು ಮತ್ತು ಕಾಪಾಡುವಾಗ ವಿಭಿನ್ನ ರೀತಿಯ ಸ್ಥಿತಿಗಳನ್ನು ಸಹ ಗುಣಪಡಿಸಲು ಒಪ್ಪುವಂತಹ ವೈದ್ಯಕೀಯ ಆರೈಕೆ ಯೋಜನೆಯ ರಚನೆಯನ್ನು ಒಳಗೊಂಡಿರುತ್ತದೆ.

ಜಿರಿಯಾಟ್ರಿಕ್ ವಿಭಾಗವು ಬುದ್ಧಿಮಾಂದ್ಯತೆ ಚಿಕಿತ್ಸಾ ಕಾರ್ಯಕ್ರಮಗಳು ಮತ್ತು ಮರೆವಿನ ಸಮಸ್ಯೆಯನ್ನು ಮೌಲ್ಯಮಾಪನ ಮಾಡುವಲ್ಲಿ ಬಹಳ ನಿರ್ದಿಷ್ಟವಾಗಿದೆ. ಇದರ ಜೊತೆಯಲ್ಲಿ ಮಣಿಪಾಲ್ ಆಸ್ಪತ್ರೆಯು ಬಹು ಅಂಗಾಂಗ ವೈಫಲ್ಯ ಸಿಂಡ್ರೋಮ್ ಗೆ ಒಳಪಡಬಹುದಾದ ರೋಗಿಗಳಿಗೆ ಚಿಕಿತ್ಸೆಯನ್ನೂ ಸಹ ನೀಡುತ್ತದೆ

ಚಿಕಿತ್ಸೆಯನ್ನು ಮಾತ್ರ ನೀಡದೆ ಅವರ ಸ್ಥಿತಿಯ ಬಗ್ಗೆ ಶಿಕ್ಷಣವನ್ನು ನೀಡಲಾಗುತ್ತದೆ. 

 

ಶ್ವಾಸಕೋಶದ ಕಾಯಿಲೆಗಳು

ಆಸ್ಪಿರೇಷನ್ ನ್ಯುಮೋನಿಯಾ ಇರುವ ರೋಗಿಗಳಿಗೆ ಆಹಾರ ನುಂಗುವ ವಿಧಾನಗಳನ್ನು ಹೇಳಿಕೊಡಲಾಗುತ್ತದೆ. ಸ್ಲೀಪ್ ಆಪ್ನಿಯಾ ಇರುವ ರೋಗಿಗಳಿಗಾಗಿ ಸ್ಲೀಪ್ ಪಾಲಿಸೋಮ್ನೋಗ್ರಫಿ ಮಾಡಲಾಗುತ್ತದೆ. ಮೂಗಿನ ನಿರಂತರ ಉಸಿರಾಟ ಒತ್ತಡ ಚಿಕಿತ್ಸೆಯನ್ನು ಸಹ ಬಳಸಲಾಗುತ್ತದೆ. 

 

ನ್ಯೂರೋಲಾಜಿಕಲ್ ಕಾಯಿಲೆಗಳು 

ಮಣಿಪಾಲ್ ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿನ  ಮೆಮೊರಿ ಲಾಸ್ ಕ್ಲಿನಿಕ್ ಆಲ್ಝೈಮರ್ ಮತ್ತು ಬುದ್ಧಿಮಾಂದ್ಯತೆಯ ಅಸ್ವಸ್ಥತೆಗಳನ್ನು ಹೊಂದಿರುವ ಹೊರ ರೋಗಿಗಳಿಗೆ ಚಿಕಿತ್ಸೆಯನ್ನು ನೀಡುತ್ತದೆ. ಪ್ರತಿಯೊಬ್ಬರಿಗೆ ಸೂಕ್ತವಾದ ಚಿಕಿತ್ಸಾ ಯೋಜನೆಗಳನ್ನು ಒದಗಿಸಲೆಂದು ನಮ್ಮ ಪರಿಣಿತರು ಈ ಸ್ಥಿತಿಗಳನ್ನು ಹಲವಾರು ದೃಷ್ಟಿಕೋನಗಳಿಂದ ಅಧ್ಯಯನ ನಡೆಸಿದ್ದಾರೆ ಮತ್ತು ಅರ್ಥಮಾಡಿಕೊಂಡಿದ್ದಾರೆ.   

ಮಧುಮೇಹ ಮತ್ತು ಮೂಳೆ ಕಾಯಿಲೆ 

ಮಣಿಪಾಲ್ ಆಸ್ಪತ್ರೆಯು ಮಧುಮೇಹ, ಅಸ್ಥಿರಂಧ್ರತೆ ಮತ್ತು ಇತರ ಜೀವನಶೈಲಿ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಅವರ ಮೂಳೆ ಡೆನ್ಸಿಟೋಮೆಟ್ರಿ ಫಲಿತಾಂಶಗಳ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುತ್ತದೆ. ಈ ರೋಗಿಗಳಿಗಾಗಿ ತೆಗೆದುಕೊಳ್ಳುವ ವಿಧಾನವು ಮೂಲ ಮತ್ತು ವೈದ್ಯಕೀಯ ಎರಡನ್ನೂ ಸಂಯೋಜಿಸಿ ನೀಡಲಾಗುತ್ತದೆ. 

 

 

Facilities & Services

ಮಣಿಪಾಲ್ ಆಸ್ಪತ್ರೆಯ ಜಿರಿಯಾಟ್ರಿಕ್ ಮೆಡಿಸಿನ್ ವಿಭಾಗದಳ್ಳಿ ಈ ಕೆಳಗಿನ ಸಮಸ್ಯೆಗಳಿಗೆ ಚಿಕಿತ್ಸೆಯನ್ನು ಒದಗಿಸಲಾಗುತ್ತದೆ: 

  • ಅನೇಕ ವೈದ್ಯಕೀಯ ಸ್ಥಿತಿಗಳು 

  • ದೈನಂದಿನ ಕೆಲಸಕಾರ್ಯಗಳನ್ನು ಪೂರ್ಣಗೊಳಿಸಲು ಕಷ್ಟವೆನಿಸುವುದು 

  • ಪಾಲಿಫಾರ್ಮಸಿ - ಅನೇಕ ಔಷಧಿಗಳನ್ನು ತೆಗೆದುಕೊಳ್ಳುವುದು 

  • ನಿದ್ದೆ, ನಡಿಗೆ, ಸಮತೋಲನದಲ್ಲಿ ಸಮಸ್ಯೆ ಉಂಟಾಗುವುದು 

  • ಮರೆವಿನ ಸಮಸ್ಯೆಗಳು 

  • ಆಗಾಗ್ಗೆ ಬೀಳುವುದು ಮತ್ತು ಬೀಳುವ ಭಯ ಕಾಡುವುದು 

  • ಆಗಾಗ್ಗೆ ಮೂತ್ರದ ಸಮಸ್ಯೆಗಳು 

  • ತೂಕ ಇಳಿಕೆ 

  • ಮಲಬದ್ಧತೆ 

  • ಕ್ಯಾನ್ಸರ್ ಮತ್ತು ಉಪಶಮನ 

ಜಿರಿಯಾಟ್ರಿಕ್ ಮೌಲ್ಯಮಾಪನಗಳು - ರೋಗಿಗೆ ಚಿಕಿತ್ಸೆ ಮತ್ತು ಆರೈಕೆಯನ್ನು ನೀಡುವಲ್ಲಿ ಜಿರಿಯಾಟ್ರಿಕ್ ಮೌಲ್ಯಮಾಪನವು ಮೊದಲನೆಯ ಹಂತವಾಗಿದೆ. ಈ ಮೌಲ್ಯಮಾಪನದಿಂದ ಮುಂದಿನ ಚೇತರಿಕೆಯ ದಾರಿಯನ್ನು ನಿಗಾವಣೆ ಮಾಡಲು ಇದು ಬುನಾದಿಯಾಗುತ್ತದೆ. 

FAQ's

The geriatric specialist will first gather general information about the patient's health, review the patient's medical history, and conduct a physical examination. Based on the doctor’s findings, further treatment or diagnostic procedures are recommended.

The most common conditions are hearing loss, refractive errors, cataracts, neck and back pain and osteoarthritis, pulmonary disease, diabetes, chronic obstructive pulmonary disease, dementia, and depression. To take care of your health, visit our geriatric medicine hospital in Bangalore.

The greatest cause of disability is sensory impairments, neck and back pain, depressive disorders, diabetes, dementia and osteoarthritis. Visit our best geriatric hospital in Old Airport Road Bangalore to have the best treatment.

Some illnesses are caused due to genetic factors while some conditions are caused due to environmental conditions. Each individual is different and there is no ‘typical’ geriatric patient. Some may have the mental and physical capacities of 20 year olds while others suffer from significant decline in mental and physical capacities at a much younger age. Conditions can be treated and managed and not all conditions can be prevented. Visit Manipal Hospitals, the geriatric hospital in Bangalore to consult with the experts.

Yes, yearly health checkups and discussions with your doctor about other risk factors should never be overlooked. It is important to keep track of your health at an elderly age.

ಮಣಿಪಾಲ್ ಆಸ್ಪತ್ರೆಯು ತನ್ನ ರೋಗಿಗಳೊಂದಿಗೆ ದೀರ್ಘ ಸಮಯದ ಸಂಬಂಧವನ್ನು ನಿರ್ಮಿಸಲು, ಅವರಿಗೆ ಉನ್ನತ ಗುಣಮಟ್ಟದ, ವೈಯಕ್ತಿಕಗೊಳಿಸಿದ ಆರೈಕೆಯನ್ನು ಒದಗಿಸಲು ಬದ್ಧವಾಗಿದೆ. ನಮ್ಮ ಹೆಮಟೋ-ಆಂಕೋಲಾಜಿ ವಿಭಾಗವು ಮತ್ತು ಅದರ ರೋಗಿಗಳು ಇದಕ್ಕೆ ಸಾಕ್ಷಿಯಾಗಿದ್ದಾರೆ. ಜಿರಿಯಾಟ್ರಿಕ್ ಸಮಸ್ಯೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಮತ್ತು ಇಂದೇ ನಮ್ಮ ಜಿರಿಯಾಟ್ರಿಕ್ ತಜ್ಞರೊಬ್ಬರನ್ನು ಭೇಟಿ ಮಾಡಲು ನಮ್ಮನ್ನು ಸಂಪರ್ಕಿಸಿ.

ಅಪಾಯಿಂಟ್ಮೆಂಟ್
ಆರೋಗ್ಯ ತಪಾಸಣೆ
ಮನೆ ಆರೈಕೆ
ನಮ್ಮನ್ನು ಸಂಪರ್ಕಿಸಿ
ಮುಖ್ಯಾಧಿಕಾರಿ ಗೆ ಬರೆಯಿರಿ
review icon ನಮ್ಮನ್ನು ಪರಿಶೀಲಿಸಿ
ಕರೆ ಮಾಡಿ