ಸ್ಪೋರ್ಟ್ಸ್ ಮೆಡಿಸಿನ್


ಎಲ್ಲ ವಯಸ್ಸಿನವರ ಆರೈಕೆಗಾಗಿ ಮತ್ತು ವಿಭಿನ್ನ ಮಟ್ಟದ ಸ್ಪರ್ಧಾತ್ಮಕತೆಗಾಗಿ ಮಣಿಪಾಲ್ ಆಸ್ಪತ್ರೆಯ ಕ್ರೀಡಾ ವಿಭಾಗವು ತನ್ನ ಪರಿಣಿತಿಯ ಸ್ಪೋರ್ಟ್ಸ್ ಮೆಡಿಸಿನ್ಗಾಗಿ ದೇಶಾದ್ಯಂತ ಹೆಸರುವಾಸಿಯಾಗಿದೆ. ನಾವು ಭಾಗವಹಿಸುವಿಕೆಯ ಪೂರ್ವದ ದೈಹಿಕ ಮತ್ತು ಗಾಯದ ಮೌಲ್ಯಮಾಪದಿಂದ ಹಿಡಿದು ಕ್ರೀಡಾಪಟುಗಳ ತರಬೇತಿ, ದೈಹಿಕ ತರಬೇತಿ ಹಾಗೂ ಕ್ರೀಡಾ ಪೋಷಣೆಯವರೆಗೆ ಕ್ರೀಡಾಪಟುಗಳ ಎಲ್ಲಾ ಅಗತ್ಯತೆಗಳಿಗಾಗಿ ತಡೆಗಟ್ಟುವಿಕೆ, ಚಿಕಿತ್ಸೆ ಮತ್ತು ಪುನರ್ವಸತಿ ನೀಡುವ ಅಂತಿಮ ಗುರಿಯೊಂದಿಗೆ ಕ್ರೀಡೆಗೆ ಸಂಬಂಧಿತ ಸಂಪೂರ್ಣ ಆರೈಕೆಯನ್ನು ಒದಗಿಸುತ್ತೇವೆ.

OUR STORY

Know About Us

Why Manipal?

ಮಣಿಪಾಲ್ ಆಸ್ಪತ್ರೆಗಳಲ್ಲಿರುವ ವೈದ್ಯರುಗಳು ಅತ್ಯುತ್ತಮ ಗುಣಮಟ್ಟದ ಆರೈಕೆಯನ್ನು ಒದಗಿಸಲು ತರಬೇತಿಯನ್ನು ಪಡೆದಿದ್ದಾರೆ. ನಮ್ಮ ಸಿಬ್ಬಂದಿಯು ಸಹಾನುಭೂತಿ, ಪರಿಣಿತಿ ಹೊಂದಿದ್ದು ಅವರು ಎಲ್ಲ ವಿಧಗಳ ಗಾಯಗಳನ್ನು ಮೌಲ್ಯಮಾಪನ ಮಾಡಲು ಅವರಿಗೆ ಸಹಾಯ ಮಾಡಲು ಸುಧಾರಿತ ರೋಗನಿರ್ಣಯ ಸಾಧನಗಳನ್ನು ಒದಗಿಸಲಾಗಿದೆ. ನಾವು ಎಲ್ಲಾ ಚಟುವಟಿಕೆ ಮಟ್ಟಗಳು ಮತ್ತು ವಯಸ್ಸಿನ ಗುಂಪಿನವರಿಗಾಗಿ ಕ್ರೀಡೆಯ ಸಂಬಂಧಿತ ಚಿಕಿತ್ಸೆ ಮತ್ತು ಸೇವೆಗಳ ವಿಸ್ತಾರ ಶ್ರೇಣಿಯನ್ನು ಒದಗಿಸುತ್ತೇವೆ.

Treatment & Procedures

ಮಸ್ಕುಲೋಸ್ಕೆಲಿಟಲ್ ಪುನರ್ವಸತಿ

ಮಣಿಪಾಲ್ ಆಸ್ಪತ್ರೆಯಲ್ಲಿರುವ ಸ್ಪೋರ್ಟ್ಸ್ ಮೆಡಿಸಿನ್ ತಂಡವು ಮಾಂಸಖಂಡಗಳ ಕಾಯಿಲೆಗಳು, ಗಾಯಗಳು ಅಥವಾ ಮತ್ತಿನ್ಯಾವುದೇ ರೀತಿಯ ಸಮಸ್ಯೆಗಳಿಗಾಗಿ ವೈಯಕ್ತಿಕಗೊಳಿಸಲಾದ ಪುನರ್ವಸತಿ ಸೇವೆಗಳನ್ನು ಮತ್ತು ಚಿಕಿತ್ಸೆಗಳನ್ನು ಒದಗಿಸುತ್ತದೆ. ನಮ್ಮ ತಜ್ಞರು ಶಸ್ತ್ರಚಿಕಿತ್ಸೆ ನಂತರದ ಕೀಲು ಬದಲಾವಣೆ ಚಿಕಿತ್ಸೆ, ಬೆನ್ನೆಲುಬಿನ ಆರೈಕೆ, ಮೂಳೆ ಮುರಿತದ ಸರಿಪಡಿಸುವಿಕೆ ಮತ್ತು ಕ್ರೀಡಾ ಸಮಯದಲ್ಲಿ ಉಂಟಾಗುವ ಗಾಯಗಳ ಸರಿಪಡಿಸುವಿಕೆಯಲ್ಲಿ ಹೆಚ್ಚಿನ…

Read More

ಮಣಿಪಾಲ್ ಆಸ್ಪತ್ರೆಯಲ್ಲಿ ನಾವು ಪರಿಣಾಮಕಾರಿಯಾದ ಚಿಕಿತ್ಸೆಗಳೊಂದಿಗೆ ಕ್ರೀಡಾಪಟುಗಳ ಸಮಯವನ್ನು ಆದಷ್ಟು ಕಡಿಮೆ ವ್ಯರ್ಥವಾಗುವಂತೆ ಪ್ರಯತ್ನಿಸುತ್ತೇವೆ. ನಮ್ಮ ತಜ್ಞರು ಒದಗಿಸುವ ಚಿಕಿತ್ಸೆಗಳು ಸುರಕ್ಷಿತವಾಗಿದ್ದು ಇದು ದೀರ್ಘಾವಧಿಯ ಕಾರ್ಯಕ್ಷಮತೆಯ ಗುರಿಗಳನ್ನು ಸಾಧಿಸುವತ್ತ ಉದ್ದೇಶಿಸಿರುತ್ತದೆ. ನಾವು ರೋಗಿಯ ಅಂತಿಮ ಗುರಿ ಯನ್ನು ಪರಿಗಣಿಸುತ್ತೇವೆ ಮತ್ತು ಯಾವುದೇ ಚಿಕಿತ್ಸಾ ಆಯ್ಕೆಗಳನ್ನು ಶಿಫಾರಸ್ಸು ಮಾಡುವ ಮುನ್ನ ಅದರ ಪೂರ್ಣ ಮಾಹಿತಿಯನ್ನು ತಿಳಿದುಕೊಂಡಿರುತ್ತೇವೆ. ನಮ್ಮ ಬಹುಕ್ಷೇತ್ರಿಯ ಸ್ಪೋರ್ಟ್ಸ್ ಮೆಡಿಸಿನ್ ನಲ್ಲಿರುವ ತಂಡವು ಕನಿಷ್ಠ ಇನ್ವೇಸಿವ್ ಕಾರ್ಯವಿಧಾನಗಳಲ್ಲಿ ಮತ್ತು ಅತ್ಯಧಿಕ ಸುಧಾರಿತ ಆರ್ಥ್ರೋಸ್ಕೋಪಿಕ್ ವಿಧಾನಗಳಲ್ಲಿ ಅದರಲ್ಲೂ ಮಂಡಿ, ತೋಳುಗಳು ಮತ್ತು ಸೊಂಟದ ಗಾಯಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ವಿಶೇಷಜ್ಞರಾಗಿದ್ದಾರೆ. ಇದರಿಂದ ಚಿಕಿತ್ಸೆ ಪಡೆಯುತ್ತಿರುವ ಕ್ರೀಡಾಪಟುಗಳಲ್ಲಿ ಶೀಘ್ರ ಚೇತರಿಕೆಯನ್ನು ಖಚಿತಪಡಿಸುತ್ತದೆ.

Facilities & Services

ಮಣಿಪಾಲ್ ಆಸ್ಪತ್ರೆಗಳ ಸ್ಪೋರ್ಟ್ಸ್ ಮೆಡಿಸಿನ್ ವಿಭಾಗವು ಗಾಯಗಳಿಂದ ತ್ವರಿತ ಗುಣಮುಖವಾಗಲು ಮತ್ತು ನೋವನ್ನು ನಿರ್ವಹಣೆ ಮಾಡುವ ಉದ್ದೇಶದೊಂದಿಗೆ ಕ್ರೀಡಾಪಟುಗಳು ಮತ್ತು ಇತರರಿಗೆ ಆರೈಕೆಯನ್ನು ಒದಗಿಸುತ್ತದೆ. ಸ್ಪೋರ್ಟ್ಸ್ ಮೆಡಿಸಿನ್ ವಿಭಾಗವು ಶಸ್ತ್ರಚಿಕಿತ್ಸಕರೊಂದಿಗೆ ಕಾರ್ಯನಿರ್ವಹಿಸುತ್ತದೆ ಮತ್ತು ಸುಧಾರಿತ ಇಮೇಜಿಂಗ್ ತಂತ್ರಗಳ ಜೊತೆಯಲ್ಲಿ ಕನಿಷ್ಠ ಇನ್ವೇಸಿವ್ ಶಸ್ತ್ರಚಿಕಿತ್ಸಾ ವಿಧಾನಗಳ ಬಳಕೆಯೊಂದಿಗೆ ರೋಗಿಯ ಆರೋಗ್ಯವನ್ನು ಮರಳಿ ಸುಧಾರಿಸುವತ್ತ ಕಾರ್ಯನಿರ್ವಹಿಸುತ್ತಾರೆ. ನಾವು ಸಮಾಲೋಚನೆಯನ್ನು ಸಹ ಮಾಡುತ್ತೇವೆ.

ನಾವು ಒದಗಿಸುವ ಕೆಲವು ಸ್ಪೋರ್ಟ್ಸ್ ಮೆಡಿಸಿನ್ ಸೇವೆಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ: - ಅತ್ಯಾಧುನಿಕ ಉಪಕರಣಗಳೊಂದಿಗೆ ಆರ್ತ್ರೋಸ್ಕೊಪಿ ಥಿಯೇಟರ್ - ವಿಶೇಷ ಚಿಕಿತ್ಸಕರೊಂದಿಗೆ ಸಂಪೂರ್ಣ ಸುಸಜ್ಜಿತ ಪುನರ್ವಸತಿ ಮತ್ತು ಫಿಸಿಯೋ ಘಟಕ - ಕೀಹೋಲ್ ಶಸ್ತ್ರಚಿಕಿತ್ಸೆ - ಮೊಣಕಾಲು, ಮೊಣಕೈ, ಪಾದ, ಭುಜ, ಸಣ್ಣ ಕೀಲುಗಳು - ಆರ್ತ್ರೋಸ್ಕೋಪಿಕ್ ಭುಜ ಶಸ್ತ್ರಚಿಕಿತ್ಸೆಗಳು - ವ್ಯಕ್ತಿಯ ಸ್ವಂತ ಕಲ್ಚರ್ಡ್ ಕೋಶಗಳ ಆಟೋಲೋಗಸ್ ಕೊಂಡ್ರೋಸೈಟ್ ಇಂಪ್ಲಾಂಟೇಶನ್ (ಮುಖ್ಯವಾಗಿ ಹಾನಿಗೊಳಗಾದ ಮೃದ್ವಸ್ಥಿಗೆ) - ಆಟೋಲೋಗಸ್ ಆಸ್ಟಿಯೊಕಾಂಡ್ರಲ್ ಆಟೋಗ್ರಾಫ್ಟ್ - ಪುನರ್ ಶಸ್ತ್ರಚಿಕಿತ್ಸೆ (ವಿಫಲವಾದ ಅಸ್ಥಿರಜ್ಜು ಶಸ್ತ್ರಚಿಕಿತ್ಸೆಗಳಿಗೆ) - ಬಹು ಅಸ್ಥಿರಜ್ಜು ಮೊಣಕಾಲು ಗಾಯಗಳು ಮತ್ತು ಇತರ ಮಸ್ಕುಲೋಸ್ಕೆಲಿಟಲ್ ಗಾಯಗಳ ಸರಿಪಡಿಸುವಿಕೆ - ಕ್ರೀಡಾ ತರಬೇತಿ ಮತ್ತು ಫಿಟ್ನೆಸ್ ತರಬೇತಿ, ಸ್ಪ್ಲಿನ್ಟಿಂಗ್ ಮತ್ತು ಬ್ರೇಸಸ್, ಕಿನಿಸಿಯೋಲಾಜಿ

FAQ's

Specialists come together to conduct a complete analysis of the patient and to provide individual treatment protocols.

Yes, MSDs can be prevented if proper precautions are taken. For instance, those who need to lift heavy objects can be taught to lift using their leg strength rather than using their backs. Visit Manipal Hospitals for sports medicine treatment in Bangalore.

There can be different reasons for the onset of MSDs but there are several diseases that can cause the same. This includes carpal tunnel syndrome, gout, osteoarthritis, and fibromyalgia.

The best way to steer clear or sports-related injuries and the harms of MSDs is to speak with your doctor about precautionary methods. Sports medicine treatment in Old Airport Road is available at Manipal Hospitals, visit today.

Yes, athletes or other working in fields that can cause similar injuries should have periodic check-ups are done to ensure they are safe from serious disorders which may arise in the future.

ಮಣಿಪಾಲ್ ಆಸ್ಪತ್ರೆಗಳು ಉನ್ನತ ಗುಣಮಟ್ಟದ, ವೈಯಕ್ತಿಕಗೊಳಿಸಿದ ಆರೈಕೆ ಮತ್ತು ರೋಗಿಗಳೊಂದಿಗೆ ದೀರ್ಘಾವಧಿಯ ಸಂಬಂಧಗಳನ್ನು ನಿರ್ಮಿಸಲು ಬದ್ಧವಾಗಿದೆ. ನಮ್ಮ ಸ್ಪೋರ್ಟ್ಸ್ ಮೆಡಿಸಿನ್ ವಿಭಾಗವು ಮತ್ತು ಅದರ ರೋಗಿಗಳು ಇದಕ್ಕೆ ಉತ್ತಮ ನಿರ್ದರ್ಶನವಾಗಿದೆ. ಸ್ಪೋರ್ಟ್ಸ್ ಮೆಡಿಸಿನ್ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಮತ್ತು ಇಂದೇ ನಮ್ಮ ವಿಶೇಷ ತಜ್ಞರೊಂದಿಗೆ ಭೇಟಿಯನ್ನು ನಿಗದಿಪಡಿಸಲು ನಮ್ಮನ್ನು ಸಂಪರ್ಕಿಸಿ.

Explore Stories

ಅಪಾಯಿಂಟ್ಮೆಂಟ್
ಆರೋಗ್ಯ ತಪಾಸಣೆ
ಮನೆ ಆರೈಕೆ
ನಮ್ಮನ್ನು ಸಂಪರ್ಕಿಸಿ
ಮುಖ್ಯಾಧಿಕಾರಿ ಗೆ ಬರೆಯಿರಿ
review icon ನಮ್ಮನ್ನು ಪರಿಶೀಲಿಸಿ
ಕರೆ ಮಾಡಿ